ಸ್ವಾಮಿ ವಿವೇಕಾನಂದರವರು ಸರ್ವಧರ್ಮ ಸಮೇಳನದಲ್ಲಿ 1893ರ ಸಪ್ಟೆಂಬರ್ 11ನೇ ತಾರೀಖು ಅಮೆರಿಕದ ಚಿಕಾಗೋದಲ್ಲಿ ನಿಂತು ಭಾರತೀಯರ ಪರವಾಗಿ ಮಾತನಾಡಿದ ಸವಿ ನೆನಪಿಗೆ 125 ವರ್ಷದ ಸಂಭ್ರಮ.ಈ ಸಂಭ್ರಮವನ್ನು ಪೊನ್ನಂಪೇಟೆಯ ಶಾರದಾ ಆಶ್ರಮದಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್.ಎಸ್.ಎಸ್ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಸಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲದೆ ಉಪಹಾರ ವಿತರಿಸಲು ಸಹಾಯ ಮಾಡಿದರು.
